Friday, September 9, 2011

ಬೇಡ ಮಾಡಬೇಡ ???

ಎಣೆ ಎಣೆಯಾಗಿರುವ ನನ್ನ ಪ್ರೀತಿಯನ್ನು
ಎಣ್ಣೆಯಲ್ಲಿ ಕರಿಯಬೇಡ |
ಮೃದುವಾಗಿರುವ ನನ್ನ ಹೃದಯವನ್ನು 
ಬಾಣಲೆಯಲ್ಲಿ ಹುರಿಯಬೇಡ ||

ಬೆಂದಿರುವ ಭಾವನೆಗಳನ್ನು 
ಬಿಸಿನೀರಿನಲ್ಲಿ ಕುದಿಸಬೇಡ|
ಕಲ್ಲೋಲವಾಗಿರುವ ಮನವನ್ನು 
ಮಾತಿನಿಂದ ಕದಡಬೇಡ|||

ಅರ್ಥ ಮಾಡಿಕೋ ನಿನ್ನ ದುಗುಡವ 
ಪಡೆದುಕೋ ಉಸಿರಾಟದ ಹಿಡಿತವ |
ಬಿಗಿದಪ್ಪಿಕೋ  ನನ್ನ ನಿನ್ಹಿಡಿಥದಲಿ
ಸೇರುವುದು ನಮ್ಮ  ನೋವುಗಳು ಮನೆಯ ಗೂಡಿನಲಿ||

ಹೋಲಿಸಬೇಡ ನಿನ್ನ ಪ್ರೀತಿಯನೇನಕೂ
ಸಿಗುವುದು ನಿನಗೆ ಶಾಂತಿಯ ಬದುಕು |
ವಿಶ್ವಾಸವನಿಟ್ಟಕೋ ನಮ್ಮಿಬ್ಬರಲಿ 
ದೊರಕುವುದು ನಮಗೂ  ಸ್ವರ್ಗದ  ತಪ್ಪಲು||

 ಜೀವನದ ದಾರಿ  ಬಲು ಕಷ್ಟ 
ನೋವ ನುಂಗಿಕೊ ??????
ಆಗ ಆಗುವುದು ಇದು ಬಹಳ ಇಷ್ಟ || || ||| |||

                                                                             ಚತುರ್ಮುಖ 

No comments:

Post a Comment