ಇದು ಪೂರ್ಣ ಚಂದ್ರ ತೇಜಸ್ವಿಯವರ ಮೊಟ್ಟ ಮೊದಲನೆಯ ಕಾದಂಬರಿ.
ತೇಜಸ್ವಿಯವರ ಮೊದಲ ಕಾದಂಬರಿಯಾದ್ದರಿಂದ, ಅವರ ಬೇರೆ ಕಾದಂಬರಿ ಅಷ್ಟು maturity ಇಲ್ಲ. ತೇಜಸ್ವಿ ಪುಸ್ತಕ ಓದಿ ಪಳಗಿದವರಿಗೆ ಹೆಚ್ಚು ಅರ್ಥಪುರ್ನವಾಗಿದೆ.
ಮೂರು ಜನ protagonists ಇಲ್ಲಿ. ಒಂದು ಸೋಮು - ಈಗತಾನೆ ಕಾಲೇಜ್ ಮುಗಿಸಿ ಪುಡಿ ಮೀಸೆ ಹೊತ್ತ ಕಮುನಿಸಮ್ ಪ್ರವಾದಿ. ಇನ್ನೊಂದು ನಳಿನಿ - ಹಳ್ಳಿ ವಾತಾವರಣದಲ್ಲಿ ಬೆಳೆದ ಹರೇ ವಯಸ್ಸಿನ ಬಾಲೆ, ಮತೊಂದು ಸುಬದ್ರ - ಸೋಮುವಿನ ಕ್ಲಾಸ್ ಮೇಟ್.
ಇವರ ಮೂವರಲ್ಲಿ ನಡೆಯುವ ಲೋಕೋಪ ವ್ಯವಹಾರಗಳು ಹಾಗು ಆಂತರಿಕ ಹುಚ್ಚು ಕನಸುಗಳು ಪುಸ್ತಕದ ಮುಕ್ಯ ವಸ್ತು. ಮದ್ಯದಲ್ಲಿ ಒಂದು ವೆಂಕು, ಮತ್ತು ನಳಿನಿಯ ತಂದೆ ಅಲ್ಲಿ ಇಲ್ಲಿ ಬಂದು ಹೋಗುವ ಪಾತ್ರಗಲು.
"ಅಬ್ಬಾ ಆ ಹಕ್ಕಿಗಳ ಬಯಕೆ ಎಂಥದು. ಸಪ್ತ ಸಮುದ್ರಗಳನ್ನೇ, ದೆಶಾಂಥರಗಳನ್ನೇ ದಾಟಿ ಸಾಗುತ್ತವಲ್ಲ. ಬಯಕೆ ಪ್ರೇಮದ ಆರಂಭ! ತೃಪ್ತಿ ಪ್ರೇಮದ ಅಂತ್ಯವೇ? ಪ್ರೆಮಿಸೊದು ಅಂದರೆ ಚಲಿಸುವುದು. ಕಾಲದಲ್ಲೋ, ದೇಶದಲ್ಲೊ, ಕಾಲದೇಶಗಳಿಗೆ ಮೀರಿದ ಅತೀತದಲ್ಲೊ ಚಲಿಸುವುದು. ಒಂದರಿಂದ ಇನ್ನೊಂದಕ್ಕೆ ಹೋಗುವುದು. ಪ್ರೇಮವೆಂದರೆ ಯಾವುದರಿಂದಲೋ ನಿರ್ಗಮಿಸುವ ನಿತ್ಯದುರಂತ. ಎಲ್ಲಿಗೋ ಆಕರ್ಷಿತರಾದೆವೆಂದೆರೆ ಇನ್ನೆಲ್ಲಿಂದಲೋ ವಿಕರ್ಷಿತರಾದೆವೆಂತಲೇ? ಎಲ್ಲವನ್ನು ಹೊಂದಿರುವ ಸರ್ವ ಸಾಫಲ್ಯತೆ ಬಹುಶಃ ಈ ದೇಹದೊಂದಿರೋವರೆಗೆ ಅಸಾದ್ಯ."
ಹೀಗೆ ಸೋಮುವಿನ ಯೊಚನೆಗಲು. ಅಲ್ಲಿ ನಳಿನಿ ತಂದೆ ತೀರಿಕೊಂಡ ನೋವಿನಲ್ಲಿ ಬಲಲುತಿದ್ದರೆ, ಸೋಮನಿಗೆ ಪ್ರಣಯದಾಸೆ. ಅದರ ಮೇಲೆ ಗಿಲ್ಟಿ ಫೀಲಿಂಗ್ ಬೇರೆ.
ಟೈಮ್ ಪಾಸು ಪುಸ್ತಕವಾದರೂ ಆಗೀಗೋಮ್ಮೆ ಮನಸನ್ನು ಕಲಸುಮೇಲೋಗರ ಮಾಡುವ ಚಿಂತನಾತ್ಮಕ ಡೈಲಾಗ್ಸ್ ಸಾಕಷ್ಟು ಕಾಣ ಸಿಕ್ತಾವೆ.
No comments:
Post a Comment