ಓಂ ಶ್ರೀ ಪರಮಾತ್ಮನೇ ನಮಃ
ಅಧ್ಯಾಯ ೯
ಶ್ಲೋಕ ೪
"ಮಯಾ ತತಮಿದಂ ಸರ್ವಂ ಜಗದವ್ಯಕ್ತಮೂರ್ತಿನಾ ।
ಮತ್ ಸ್ಥಾನಿ ಸರ್ವಭೂತಾನಿ ನಚಾಹಂ ತೇಷ್ವವಸ್ಥಿತಃ" ॥೪॥
ಅರ್ಥ
ಮಯಾ- ನನ್ನಿಂದ; ತತಂ- ವ್ಯಾಪ್ತವಾಗಿದೆ; ಇದಂ- ಈ; ಸರ್ವಂ- ಎಲ್ಲ; ಜಗತ್- ವಿಶ್ವ ಅಭಿವ್ಯಕ್ತಿಯು; ಅವ್ಯಕ್ತ ಮೂರ್ತಿನಾ- ಅವ್ಯಕ್ತ ರೂಪದಿಂದ; ಮತ್ ಸ್ಥಾನಿ- ನನ್ನಲ್ಲಿ; ಸರ್ವ ಭೂತಾನಿ- ಎಲ್ಲಾ ಜೀವಿಗಳು; ನ- ಇಲ್ಲ; ಚ- ಕೂಡ; ಅಹಂ- ನಾನು; ತೇಷು- ಅವುಗಳಲ್ಲಿ; ಅವಸ್ಥಿತಃ- ನೆಲೆಸಿದ್ದೇನೆ.
ಅನುವಾದ
"ನನ್ನ ಅವ್ಯಕ್ತ ಸ್ವರೂಪದಲ್ಲಿ ನಾನು ಇಡೀ ವಿಶ್ವವನ್ನು ವ್ಯಾಪಿಸಿದ್ದೇನೆ. ಎಲ್ಲಾ ಜೀವಿಗಳೂ ನನ್ನಲ್ಲಿದ್ದಾರೆ. ನಾನು ಅವರಲ್ಲಿ ಇಲ್ಲ"
(ಈ ಎಲ್ಲ ಜಗತ್ತು ಮೈದೋರದ ನನ್ನಿಂದ ತುಂಬಿದೆ.ಇಲ್ಲಿ ಇರುವವೆಲ್ಲ ನನ್ನಲ್ಲಿ ನೆಲೆಸಿವೆ. ನಾನು ಅವುಗಳ ನೆರವಿನಲ್ಲಿಲ್ಲ)
ಭಾಷ್ಯ
ಕೃಷ್ಣ ಹೇಳುತ್ತಾನೆ - “ನಾನು ಇಡೀ ಜಗತ್ತಿನಲ್ಲಿ ತುಂಬಿರುವ ಅವ್ಯಕ್ತಮೂರ್ತಿ” ಎಂದು. ಇಲ್ಲಿ ಬಳಸಿರುವ ಅವ್ಯಕ್ತಮೂರ್ತಿ ಎನ್ನುವ ಪದದಲ್ಲಿ ಅವ್ಯಕ್ತ ಮತ್ತು ಮೂರ್ತಿ ಎನ್ನುವುದು ಪರಸ್ಪರ ವಿರುದ್ಧ ಪದಗಳು. ಅವ್ಯಕ್ತ ಎಂದರೆ ಕಾಣದ್ದು, ಆಕಾರವಿಲ್ಲದ್ದು. ಮೂರ್ತಿ ಎಂದರೆ ಆಕೃತಿ ಮತ್ತು ರೂಪ. ಭಗವಂತ ಆಕಾಶದಂತೆ ಎಲ್ಲೆಡೆ ವ್ಯಾಪಿಸಿರುವ ಅವ್ಯಕ್ತ ಆದರೆ ಆತ ಜ್ಞಾನಾನಂದಮಯನಾಗಿ ಎಲ್ಲರೊಳಗೆ ತುಂಬಿರುವ ಮೂರ್ತಿ. ಒಂದೊಂದು ವಸ್ತುವಿನಲ್ಲೂ ಒಂದೊಂದು ರೂಪದಲ್ಲಿ ತುಂಬಿರುವ ಅನಂತ ರೂಪಗಳುಳ್ಳವ ಆ ಭಗವಂತ. ಕೃಷ್ಣ ಹೇಳುತ್ತಾನೆ “ಪ್ರತಿಯೊಂದು ವಸ್ತುವಿಗೂ ನಾನು ಆಧಾರ, ಈ ಇಡೀ ಪ್ರಪಂಚ ನನ್ನನ್ನು ಅವಲಂಬಿಸಿಕೊಂಡಿದೆ. ಆದರೆ ನಾನು ನಿರಾಲಂಬನಾಗಿ ಎಲ್ಲೆಡೆ ತುಂಬಿದ್ದೇನೆ”. ಎಂದು.
ಭಾಷ್ಯ ಕೃಪೆ
||ದಿ|| ಶ್ರೀ ಬನ್ನಂಜೆ ಗೋವಿಂದಾಚಾರ್ಯರು
Translation
"This entire universe is pervaded by Me, in an unmanifest form. All beings abide in Me, but I do not abide in them"
Commentary
This entire universe — composed of both sentient and insentient beings, is pervaded by Me — the inner controller whose essential nature is unmanifest. The meaning is that all this universe is pervaded by Krishna the Principal (śeṣi) so that He may sustain and manage it. This [doctrine of] universal pervasion by an inner controller, who is invisible to all beings, is taught in the Antaryāmi- Brāhmaṇa. So also Krishna’s primacy over everything is taught.
Commentary by Shree Rāmānujāchārya
No comments:
Post a Comment