Thursday, November 5, 2020

ಧರ್ಮ ಎಂದರೇನು?

The most important question anyone will ask during a lifetime is "What is Dharma?" Here is some notes I made from Bhagavathgeete through the book - "Jeevandharma yoga" 


ಧರ್ಮ ಎಂದರೆ ಧರಿಸಬಲ್ಲದ್ದು.

ಧರ್ಮದ ಮೂರು ವಿಧಗಳು
  • ನೈಜ
  • ನ್ಯಾಯ
  • ಮೈತ್ರಿ




ನೈಜವೆಂದರೆ ಸಹಜ ಲಕ್ಷಣ. ಯಾವ ಒಂದು ಗುಣದಿಂದ ಅಥವಾ ಶಕ್ತಿಯಿಂದ ಒಂದು ಪದಾರ್ಥ ಪದಾರ್ಥ ಆಗಿದೆಯೋ ಆ ಲಕ್ಷಣದ ವಿಕಾಸವೇ ಧರ್ಮ. ಸುಡುವುದು ಬೆಂಕಿಯ ಧರ್ಮ, ಬೀಸುವುದು ಗಾಳಿಯ ಧರ್ಮ, ಹಾರುವುದು ಪಕ್ಷಿಯ ಧರ್ಮ, ಬಿಸಿಯನ್ನು ಹೋಗಲಾಡಿ ಸಿ ತನುವಾಗಿಸುವುದು ನೀರಿನ ಧರ್ಮ, ಮೈ ಮುದಿಯಾಗುವುದು ದೇಹ ಧರ್ಮ. ಹಾಗೆಯೇ ವಯೋಧರ್ಮ, ಋತು ಧರ್ಮಗಳು. ಮನುಷ್ಯ ಯಾವ ತನ್ನ ಗುಣದಿಂದ ಅಥವಾ ಬಲದಿಂದ ಇತರ ಜನರ ಪ್ರಯೋಜನಕ್ಕೆ ಒದಗಬಹುದು ಆ ಗುಣವಿಶೇಷ ಅವನ ಧರ್ಮ. ಇಂಗ್ಲಿಷ್ನಲ್ಲಿ ಇದನ್ನು ವ್ಯಾಲ್ಯೂ ಎಂದು ಕರೆಯುತ್ತಾರೆ. ಯಾವ ಒಂದು ಗುಣದಿಂದ ಅಥವಾ  ಶಕ್ತಿಯಿಂದ ಒಂದು ಪದಾರ್ಥಕ್ಕೆ ಬೆಲೆ ಬರುತ್ತದೆ ಆ ಗುಣ ಅಥವಾ ಶಕ್ತಿ ಅದರ ಧರ್ಮ. ಹೀಗೆ ನೈಜ ದ ಪರಿಪಾಲನೆ ಧರ್ಮ.

ನ್ಯಾಯವೆಂದರೆ ಒಂದು ವಸ್ತುವಿನ ಅಥವಾ ಪ್ರಾಣಿಯ ನೈಜಾಭೀವ್ಯಕ್ತಿಯಿಂದ ಇನ್ನೊಂದುರ ನೈಜಕ್ಕೆ ಹಾನಿಯಾಗದಂತೆ ಒಂದು ಸಮೂಹದ ನಾನಾ ವ್ಯಕ್ತಿಗಳ ವಿಕಾಸನ ಗಳನ್ನು ಹದ್ದಿನಲ್ಲಿ ಇರಿಸುವ ವ್ಯವಸ್ಥೆ.

ಮೈತ್ರಿ ಎಂದರೆ ಇತರರಲ್ಲಿ ಪ್ರೀತಿ. ವ್ಯಕ್ತಿಯು ತನ್ನ ನೈಜ ದಿಂದ ಎಲ್ಲರಿಗೂ ಪ್ರಯೋಜನವಾಗುವಂತೆ ಸ್ವ ಜೀವನವನ್ನು ವಿಸ್ತಾರ ಪಡಿಸುವುದು. ಅದೇ ಆತ್ಮವಿಕಾಸ. ಅದಕ್ಕೆ ಸಾಧಕ ವಾದದ್ದು ಲೋಕಸ್ನೇಹ. ಅದೇ ಧರ್ಮ.

ಶಂಕರಾಚಾರ್ಯರು ಧರ್ಮದ ಅರ್ಥ ಹೀಗೆ ಕೊಟ್ಟಿದ್ದಾರೆ
ಯಾವ ವ್ಯವಸ್ಥೆಯೂ ಯಾವ ಚರ್ಚೆಯೂ ಲೋಕದ ಒಳ್ಳೆಯ ಸ್ಥಿತಿಗೆ ಸಾಧಕವಾಗಿ, ಜೀವಿಗಳಿಗೆ ಇಹದಲ್ಲಿ ಯೋಗಕ್ಷೇಮವನ್ನು, ಪರರಲ್ಲಿ ಸದ್ಗತಿಯನ್ನು ಸಂಪಾದಿಸಿ ಕೊಡಬಲ್ಲದೋ ಅದು ಧರ್ಮ. 

ಧರ್ಮವು ಜೀವವನ್ನು ಜಗತ್ತನ್ನು ಸಹ ಧರಿಸುತ್ತದೆ. ಜೀವಕ್ಕೂ ಜಗತ್ತಿಗೂ ಸಂಬಂಧ ತಪ್ಪಿದ್ದಲ್ಲ. ಹಾಗಿರುವಲ್ಲಿ

೧. ಜೀವಿಯ ನೈಜ ಗುಣಗಳು ಜಗತ್ತಿನ ಸಂಪರ್ಕದಿಂದ ಕೆಡದೆ ಉತ್ತಮ ಪಡುತ್ತ ಜಗತ್ತಿಗೆ ಉಪಕಾರ ವಾಗುವಂತೆ ಯು
೨. ಜಗತ್ತು ಜೀವ ಸಂಪರ್ಕದಿಂದ ಕೆಡದೆ ಉತ್ತಮ ಪಡುತ್ತಾ ಜೀವಿಗೆ ಉಪಕಾರಕ ವಾಗುವಂತೆ ಯು

ಯಾವ ಯಾವ ಚರ್ಯೆಗಳು ಕಾರ್ಯಗಳು ನಿಯಮಗಳು ನೀತಿಗಳು ಮನುಷ್ಯನಿಗೆ ಯುಕ್ತ ವಾಗುತ್ತವೆ ಅವುಗಳ ಒಟ್ಟು ಧರ್ಮ.

ಆತ್ಮ ಲಾಭಕ್ಕಿಂತ ಮೇಲ್ ಆದದ್ದು ಯಾವುದು ಇಲ್ಲ ಅದೇ ಹಿತ ಗಳಲ್ಲೆಲ್ಲ ಪರಮ ಹಿತ. ಆತ್ಮದ ಸ್ವರೂಪವನ್ನು ಕಂಡುಕೊಂಡು ಅನುಭವಿಸುವುದೇ ಮೋಕ್ಷ.

ಜೀವವು ಜಗತ್ ಪ್ರಕೃತಿ ಬೀಸುತ್ತಿರುವ ಮಾಯಜಾಲ ದೊಳಗೆ ಸಿಕ್ಕಿಕೊಂಡು ತನ್ನೊಳಗಿರುವ ಪರಮಾತ್ಮ ವಸ್ತುವನ್ನು, ಪರಮೇಶ್ವರನನ್ನು ಮರೆತು, ತದಿತರ ವಾದದ್ದನ್ನು ಸುಖವೆಂದು ನಂಬಿಕೊಂಡು, ಆ ಸುಖ ಸಾಮಗ್ರಿ ಗಾಗಿ ಪರದಾಡುತ್ತಿರುತ್ತಾರೆ. ಈ ಪರಿಭ್ರಮಣೆ ಸಂಸಾರ. ಜಗತ್ ವ್ಯಾಮೋಹದಿಂದ ಬ್ರಾಂತಿ. ಈ ಭ್ರಾಂತಿ ಪ್ರಮಾದಗಳನ್ನು ನೀಗಿ ಆತ್ಮ ಸ್ವರೂಪವನ್ನು, ಭಗವತ್ ಸ್ವರೂಪವನ್ನು ಕಂಡುಕೊಂಡು ಅನುಭವಿಸುವುದು ಹೊರಗೆ ಸಿಕ್ಕುವ ಸುಖಗಳಿಗಿಂತ ಮಹತ್ತರವಾದ ಸುಖ. ಈ ಉತ್ತಮೋತ್ತಮ ಲಾಭಕ್ಕೆ ಜೀವವನ್ನು ಅನುಗೊಳಿಸುವ ಗುಣ ಸಂಸ್ಕಾರ ವರ್ತನೆಗಳು ಧರ್ಮ. 

ಧರ್ಮದಿಂದ ಆಗುವ ಪ್ರಯೋಜನಗಳು ಮುಖ್ಯವಾಗಿ ಮೂರು
  • ಲೋಕ ಸಂಸ್ಥಿ ತಿ
  • ಜೀವಕ್ಕೆ ಸುಖ ಸಂಪಾದನೆ
  • ಜೀವಕ್ಕೆ ಹಿತಸಾಧನೆ

ಸತ್ಯವೆಂದರೆ ಯಥಾರ್ಥ - ಸಂದರ್ಭ ವಾಸ್ತವವಾಗಿ ಹೇಗಿದೆಯೋ ಅದು. ತತ್ವವೆಂದರೆ ಅದೇ. ಪ್ರಸಕ್ತ ವಾಗಿರುವ ವಿಷಯದ ನಿಜಸ್ಥಿತಿಯೇ ತತ್ವ.  ನಮಗೆ ಇರುವ ಸಂದರ್ಭದ ತತ್ವವನ್ನು - ಯಥಾರ್ಥವನ್ನು ಗ್ರಹಿಸಿ ಅದಕ್ಕೆ ನಮ್ಮ ನಡುವಳಿಕೆಯನ್ನು ಹೊಂದಿಸಿಕೊಳ್ಳುವುದು ಧರ್ಮ

ಒಟ್ಟಿನಲ್ಲಿ ಮನುಷ್ಯನು ಸ್ವ ಸುಖವನ್ನು ಸಾಧಿಸಿ ಕೊಳ್ಳುವುದರಲ್ಲಿ ಜೀವದ ಸದ್ಗತಿಯನ್ನು ಮರೆಯದೆ , ಇತರ ಜನದ ಸುಖ ಸಾಧನೆಗೆ ಅಡ್ಡಿ ತಾರದೆಯು, ಇತರ ಜನಕ್ಕೆ ತನ್ನ ನೈಜದಿಂದ ಸಹಾಯವಾಗುವಂತೆಯು ನಡೆದುಕೊಳ್ಳಬೇಕೆಂಬ ನಿಬಂಧನೆಯೇ ಧರ್ಮ.

ಒಂದೊಂದು ಜೀವದ ಸ್ವಾಭಾವ ರಚನೆಯು ಸಂದರ್ಭ ಸನ್ನಿವೇಶವು ಒಂದೊಂದು ರೀತಿ ಬೇರೆಬೇರೆಯಾಗಿರುತ್ತದೆ ಆದ್ದರಿಂದ ಒಂದೊಂದರ ಧರ್ಮವು ಬೇರೆ ಬೇರೆಯಾಗುತ್ತದೆ ಹೀಗೆ ಪ್ರತಿಯೊಬ್ಬನಿಗೂ ಅವನ ಸ್ವ-ಧರ್ಮ ಇರುತ್ತದೆ.

ಧರ್ಮ ಪ್ರಯುಕ್ತ ವಾದ ಯುದ್ಧದಲ್ಲಿ ನಿಂತು ಹೋರುವುದು ಕ್ಷತ್ರಿಯನಿಗೆ ಸ್ವಧರ್ಮ. ಅದು ಅರ್ಜುನನಿಗೆ ಕರ್ತವ್ಯ ;ವ್ಯಾಸರಿಗೆ ಅಲ್ಲ. ಪಂಚಪತಿ ಸ್ವೀಕಾರ ದ್ರೌಪತಿಗೆ ಕರ್ತವ್ಯವಾಯಿತು; ಸ್ತ್ರೀ ಲೋಕದಲ್ಲಿ ಇನ್ಯಾರಿಗೂ ಹಾಗಾಗಲಿಲ್ಲ; ಭಾವನಿಂದ ಮಕ್ಕಳನ್ನು ಪಡೆಯುವುದು ಅಂಬಿಕೆ ಅಂಬಾಲಿಕೆ ಯರಿಗೆ ಕರ್ತವ್ಯವಾಯಿತು; ಮಿಕ್ಕಾ ಸ್ತ್ರೀಯರಿಗೆ ಅಲ್ಲ. ಹೀಗೆ ಧರ್ಮ ತತ್ವವು ಜಾತಿಯನ್ನು ಅನುಸರಿಸಿ, ವ್ಯಕ್ತಿಯ ಶಕ್ತಿ-ಸಾಮರ್ಥ್ಯಗಳು ಅನುಸಾರವಾಗಿ, ಸಮಾಜ ಸಂದರ್ಭ ವಶದಿಂದ ರೂಪ ತಾಳುತ್ತದೆ.


Picture credit - 
https://timesofindia.indiatimes.com/blogs/the-photo-blog/janmashtami-these-10-cute-little-krishnas-will-melt-your-heart/








No comments:

Post a Comment