Friday, November 6, 2020

ಧರ್ಮ ಎಂದರೇನು? - Part 2

ಧರ್ಮವನ್ನು ಮುಖ್ಯವಾಗಿ ನಾಲ್ಕು ಬಗ್ಗೆ ಎಂದು ವಿಂಗಡಿಸಬಹುದು

  • ಸಾಧಾರಣ ಧರ್ಮ ಅಥವಾ ನಿತ್ಯ ಧರ್ಮ
  • ವಿಶೇಷ ಧರ್ಮ
  • ನೈಮಿತ್ತಿಕ ಧರ್ಮ
  • ಆಪದ್ಧರ್ಮ
ಸಾಧಾರಣ ಧರ್ಮ ಅಥವಾ ನಿತ್ಯ ಧರ್ಮ
ಮನುಗಳ ಪ್ರಕಾರ ಸಾಧಾರಣ ಧರ್ಮ ಅಥವಾ ನಿತ್ಯಧರ್ಮದ ಲಕ್ಷಣಗಳು ಹೀಗಿವೆ
  • ದೃಢತೆ ಮತ್ತು ಧೈರ್ಯ 
  • ಕ್ಷಮೆ
  • ದಮ 
  • ಅಸ್ತೆಯ
  • ಶೌಚ
  • ಇಂದ್ರಿಯಗಳ ಮೇಲೆ ಹತೋಟಿ
  • ಬುದ್ಧಿ ವ್ಯವಸಾಯ
  • ತತ್ವ ವಿದ್ಯೆ
  • ಸತ್ಯ ಶೀಲತೆ
  • ಸೌಮ್ಯ ಶಾಂತಿಗಳು
ಈ ಹತ್ತು ಧರ್ಮದ ಗುರುತುಗಳು. ಇವು ದೇಶ ಭೇದ, ಕಾಲಭೇದಗಳಿoದ ವ್ಯತ್ಯಾಸವಾಗದೆ ಎಲ್ಲಾ ಮನುಷ್ಯರಲ್ಲಿಯೂ ಯಾವಾಗಲೂ ಇರಬೇಕಾದ ನೀತಿಗುಣಗಳು.

PC: https://bradstevenstattoo.wordpress.com/2012/04/04/young-krishna/


ವಿಶೇಷ ಧರ್ಮ
ಇದರಲ್ಲಿ ಎರಡು ವಿಧ
೧. ಜಾತಿ ಧರ್ಮ
ಚಾತುರ್ವರ್ಣ್ಯಕ್ಕು, ನಾನಾ ಕುಲಗಳಿಗೂ ನಾನಾ ಪ್ರದೇಶಗಳಿಗೆ ಸಂಬಂಧಪಟ್ಟಿದ್ದು.
೨. ಆಶ್ರಮಧರ್ಮ
ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಸನ್ಯಾಸಿ -  ಈ ನಾನ ಆಶ್ರಮಗಳಿಗೆ ಸಂಬಂಧಪಟ್ಟ ದೀಕ್ಷೆ - ವ್ರತ - ಸಂಸ್ಕಾರ.

ನೈಮಿತ್ತಿಕ ಧರ್ಮ
ಇದು ಯಾವುದೋ ಒಂದು ಕೊಂಚ ಕಾಲದ ಉದ್ದೇಶಕ್ಕಾಗಿ ನಡೆಯತಕ್ಕದ್ದು 
ಇದರಲ್ಲಿ ಎರಡು ಬಗೆ
ಕಾಮ್ಯ, ಎಂದರೆ ತಮತಮಗೆ ಇರುವ ಬೇಡಿಕೆಗಳು ನೆರವೇರುವುದುಕ್ಕೋಸ್ಕರ ಮಾಡುವ ಪೂಜೆ, ಯಜ್ಞ  ಮೊದಲಾದವು
ಶುದ್ಧಿಕ್ರಿಯೆ, ಎಂದರೆ ದೋಷ ಪ್ರಾಯಶ್ಚಿತ್ತ ರೂಪವಾಗಿಯು ಅಶೌಚನಿವೃತ್ತಿ ರೂಪವಾಗಿಯೂ ಮಾಡಿಕೊಳ್ಳುವ ಕ್ರಿಯೆಗಳು

ಆಪದ್ಧರ್ಮ
ರೋಗ ಅರಾಜಕ ಮೊದಲಾದ ಕಾರಣಗಳಿಂದ ಮೇಲೆ ಹೇಳಿರುವ ಧರ್ಮಗಳಲ್ಲಿ ಯಾವುದನ್ನಾದರೂ ಸಾಂಗವಾಗಿ ನಡೆಸಲು ಸಾಧ್ಯವಾಗದೇ ಹೋದಾಗ ಒಂದು ಸೂಕ್ಷ್ಮ ಲಾಂಛನವನ್ನು ಮಾತ್ರವಾದರೂ ಉಳಿಸಿಕೊಳ್ಳುವುದಕ್ಕಾಗಿ ಮಾಡುವ ಆಚರಣೆಗಳು


No comments:

Post a Comment